ಕೃಷ್ಣನ ಸನ್ನಿಧಿಯಲ್ಲಿ ?ಭಕ್ತ ಅಂಬರೀಶ?
Posted date: 28 Wed, Sep 2011 ? 11:22:43 AM

ಉಡುಪಿಯ ಶ್ರೀ ಕೃಷ್ಣ ಮಠದ ಆವರಣದಲ್ಲಿ ಶ್ರೀ ಲಕ್ಷ್ಮಿವರ ತೀರ್ಥ, ಪರ‍್ಯಯಾ ಮಠ ಶಿರೂರು ಅವರ ಆಸೆಯಂತೆ ’ಭಕ್ತ ಅಂಬರೀಶ’ ಪೌರಾಣಿಕ ನಾಟಕವನ್ನು  ವಿಜಯದಶಮಿಯಂದು ಅಂದರೆ ಅಕ್ಟೋಬರ್ ೬ ೨೦೧೧ ರ ಸಂಜೆ ಎರಡೂವರೆ ತಾಸುಗಳ ಪ್ರದರ್ಶನ ಹಿರಿಯ ಪ್ರತಿಭಾನ್ವಿತ ನಟ ಶ್ರೀನಿವಾಸ ಮೂರ್ತಿಯವರ ನೇತೃತ್ವದಲ್ಲಿ ಜರುಗಲಿದೆ.

ಡಾ. ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿರುವ ಈ ಪೌರಾಣಿಕ ನಾಟಕ ಕನ್ನಡ ರಂಗಭೂಮಿಯಲ್ಲಿ ಬಹಳ ಪ್ರಸಿದ್ಧವಾಗಿದ್ದು ಇದನ್ನು ಸಿನಿಮಾ ಮಾಡಲು ಕೂಡ ಡಾ. ರಾಜ್ ಸಂಸ್ಥೆ ತಯಾರಿಯನ್ನು ಮಾಡಿಕೊಂಡಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡೇ ಹಲವಾರು ಪುಸ್ತಕಗಳನ್ನು ಓದಿ ತಿಳಿದು ಶ್ರೀ ರುದ್ರಮೂರ್ತಿ ಶಾಸ್ತ್ರಿಗಳ ಸಹಾಯದೊಂದಿಗೆ ಶ್ರೀನಿವಾಸ ಮೂರ್ತಿಯವರು ನೂತನ ನಾಟಕವನ್ನೇ ಸಿದ್ಧಪಡಿಸಿ ಈಗ ಮೊದಲ ಪ್ರಯೋಗವನ್ನು ಶ್ರೀ ಲಕ್ಷ್ಮಿವರ ತೀರ್ಥ, ಪರ‍್ಯಯಾ ಮಠ ಶಿರೂರು ಅವರ ಆಸೆಯಂತೆ ಪ್ರದರ್ಶಿಸಲಿದ್ದಾರೆ. ಇದೇ ನಾಟಕವನ್ನು ಅಕ್ಟೋಬರ್ ೧೫ ೨೦೧೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲು ನಿಶ್ಚಯವಾಗಿದೆ. ಅಂದು ಕನ್ನಡದ ಹೆಸರಾಂತ ನಟರುಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಉಡುಪಿಯಲ್ಲಿ ಪ್ರದರ್ಶಿಸಲ್ಪಡುವ ಪೌರಾಣಿಕ ನಾಟಕ ’ಭಕ್ತ ಅಂಬರೀಶ’ ಇದೀಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕೆಲವು ದಿವಸಗಳ ಮುಂಚೆಯೇ ಒಂದು ಲಾರಿಯಲ್ಲಿ ಬೇಕಾಗುವ ವಸ್ತ್ರ ವಿನ್ಯಾಸಗಳು ಹಾಗೂ ಒಂದು ಬಸ್ಸಿನಲ್ಲಿ ಕಲಾವಿದರ ತಂಡವೇ ಪ್ರಯಾಣ ಮಾಡಲಿದೆ. ಈ ನಾಟಕದಲ್ಲಿ ೧೩ ಗೀತೆಗಳು ರಾಗಸಂಯೋಜನೆಯಾಗಿದೆ. ಇದು ಜೆಕೆಎಸ್ ಮಿತ್ರಮಂಡಳಿಯ ಮೊದಲ ಪ್ರಯತ್ನ.

ಶ್ರೀನಿವಾಸ ಮೂರ್ತಿ ನಿರ್ದೇಶನದ ಜೊತೆಗೆ ಅಂಬರೀಶನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ದೂರ್ವಾಸನಾಗಿ ರಮೇಶ್ ಭಟ್, ಶ್ರೀ ವಿಷ್ಣುವಾಗಿ ನವೀನ್ ಕೃಷ್ಣ, ಡಿಂಗ್ರಿ ನಾಗರಾಜ್, ಸಂಗಮೇಶ್, ಆಶಾರಾಣಿ ಹಾಗೂ ಕನ್ನಡದ ೨೫ಕ್ಕೂ ಹೆಚ್ಚು ಕಲಾವಿದರುಗಳು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಇದೇ ನಾಟಕ ರಾಜ್ಯಾದ್ಯಂತ ಪ್ರವಾಸ ಮಾಡಿ ನಂತರ ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಪ್ರದರ್ಶಿಸಲ್ಪಡುವ ಯೋಚನೆಯಲ್ಲಿದ್ದಾರೆ ಶ್ರೀನಿವಾಸ ಮೂರ್ತಿ ಅವರು.

ಕಳೆದ ಸೋಮವಾರ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ ಮೂರ್ತಿ ತಂಡ ಅಂದು ಒಂದು ರಂಗಗೀತೆಯನ್ನು ಹಾಗೂ ರಮೇಶ್ ಭಟ್ ಮತ್ತು ನವೀನ್ ಕೃಷ್ಣ ಒಂದು ಪ್ರಸಂಗವನ್ನು ನಾಟಕದಿಂದ ಪ್ರದರ್ಶಿಸಿದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed